ಕನ್ನಡದ ಹೊಸ ಸಿನಿಮಾ ಸಂಯುಕ್ತ 2 ಆಡಿಯೋ ರಿಲೀಸ್ ಮಡಿದ ರಾಕಿಂಗ್ ಸ್ಟಾರ್ ಯಶ್ | Filmibeat Kannada

2017-11-06 18

Rocking star Yash encourages new comers in kannada film industry. Yash released the audio of Samyuktha 2 movie.

ಚಿತ್ರರಂಗದ ಪ್ರತಿಯೊಬ್ಬರಿಗೂ ಒಬ್ಬ ರೋಲ್ ಮಾಡೆಲ್ ಅಂತ ಇದ್ದೇ ಇರ್ತಾರೆ. ಗಾಡ್ ಫಾದರ್ ಇಲ್ಲದೇ ಇದ್ರು ಕೂಡ ಇವರಂತೆ ಬೆಳೆಯಬೇಕು ಎಂಬ ಆಸೆಯಂತು ಪ್ರತಿಯೊಬ್ಬರಿಗೂ ಇದ್ದೇ ಇರುತ್ತೆ. ಅದೇ ರೀತಿ ಈಗ ರಾಕಿಂಗ್ ಸ್ಟಾರ್ ಯಶ್, ರೆಬೆಲ್ ಸ್ಟಾರ್ ಹಾದಿಯಲ್ಲಿ ಸಾಗೋದಕ್ಕೆ ಮುಂದಾಗಿದ್ದಾರೆ. ಅಂಬಿಯಂತೆ ಯಶ್ ಕೂಡ ಸಿನಿಮಾರಂಗದಲ್ಲಿ ಬೆಳೆಯಬೇಕು ಹಾಗೂ ಅವರಂತೆ ಜನರಲ್ಲಿ ಬೆರಿಯಬೇಕು ಎಂದು ನಿರ್ಧರಿಸಿದ್ದಾರಂತೆ. ಈ ಮಾತನ್ನ ಸ್ವತಃ ರಾಕಿಂಗ್ ಸ್ಟಾರ್ ಯಶ್ ಅವರೇ ಹೇಳಿಕೊಂಡಿದ್ದಾರೆ. ಹಾಗಿದ್ರೆ, ಯಶ್ ಈ ಮಾತನ್ನ ಹೇಳಿದ್ದೇಲ್ಲಿ? ಯಾವ ವಿಷಯಕ್ಕೆ ಹೇಳಿದರು. ಯಶ್ ಚಿತ್ರರಂಗಕ್ಕೆ ಈಗ ಬರುತ್ತಿರುವ ಹೊಸ ಕಲಾವಿದರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ. ಹೊಸ ನಟರ ಸಿನಿಮಾಗಳ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಅವರ ಸಿನಿಮಾಗಳ ಪ್ರಚಾರಕ್ಕೆ ಜೊತೆಯಾಗಿದ್ದಾರೆ. ಸಂಯುಕ್ತ-2' ಚಿತ್ರದ ಆಡಿಯೋ ರಿಲೀಸ್ ಮಾಡಿದ ಯಶ್, ಇದೇ ಸಮಯದಲ್ಲಿ ಹೊಸಬರ ಸಿನಿಮಾಗಳ ಕಾರ್ಯಕ್ರಮಗಳಿಗೆ ಸ್ವಲ್ಪ ಸಮಯ ಕೊಡೋದರಿಂದ ಅವರಿಗೆ ಸಹಾಯ ಆಗುತ್ತೇ ಅನ್ನೋದಾದ್ರೆ ನನಗೆ ನೋ ಪ್ರಾಬ್ಲಂ ಎಂದಿದ್ದಾರೆ. 'ಸಂಯುಕ್ತ-2' ನಟ ಚೇತನ್ ಚಂದ್ರ, ನೇಹಾ ಪಾಟೀಲ್, ಐಶ್ವರ್ಯ ಸಿಂಧೋಗಿ ಅಭಿನಯದ ಸಿನಿಮಾ. ಇದೇ ವಾರ ತೆರೆಗೆ ಬರ್ತಿದೆ.

Videos similaires